ರಾಯಬಾಗ ತಾಲ್ಲೂಕಿನ ಹಂದಿಗುಂದ ಗ್ರಾಮದ ಇಳಿಜಾರು ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ | BHN
ಬೆಳಗಾಂವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮದ ಗ್ರಾಮ ದೇವತೆಯಾದ ಲಕ್ಕವ್ವ ದೇವಿ ಜಾತ್ರೆಯನ್ನು ಗ್ರಾಮದ ಪ್ರಮೂಕ ಬದಿಗಳಲ್ಲಿ ಲಕ್ಕವ್ವ ದೇವಿಯ ಪಲ್ಲಕಿಯ ಮೆರವಣಿಗೆ ನಡೆಯಿತು .
ಗ್ರಾಮದ ಗ್ರಾಮದೇವರಾದ ಹಾಲಸಿದ್ದೇಶ್ವರ ಪಲ್ಲಕಿ ಮೆರವಣಿಗೆ ಹಾಲ ಸಿದ್ಧೇಶ್ವರ ದೇವಸ್ಥಾನದಿಂದ ಇಳಿಜಾರು ಲಕ್ಕವ್ವ ದೇವಿ ದೇವಸ್ಥಾನದವರೆಗೆ ಭವ್ಯ ಮೆರವಣಿಗೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು
ಲಕ್ಕವ್ವದೇವಿ ದೇವಸ್ಥಾನದಲ್ಲಿ 151 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಭರ್ಜರಿಯಾಗಿ ಜರುಗಿತು.
ಇದೇ ಸಂದರ್ಭದಲ್ಲಿ ಮಹಾಲಿಂಗೇಶ್ವರ ಗಾಯನ ಸಂಘ ಮಹಾಲಿಂಗಪುರ ಅರ್ಪಿತಾ ಹಾಗೂ ಸಂಗಡಿಗರಿಂದ ಹಾಗೂ ಇವರ ವಿರುದ್ಧ ದುರ್ಗಾದೇವಿ ಗಾಯನ ಸಂಘ ನಿಂಗಾಪೂರ ಮುಧೋಳ ತಾಲ್ಲೂಕು ಕೆಂಪಾ ಸಂಗಡಿಗರಿಂದ ತುರಸಾ ತುರುಸಿನ ಚೌಡಿಕೆ ಪದಗಳು ಜರುಗಿದವು .
ಜಾತ್ರೆಗೆ ಆಗಮಿಸಿದ ಎಲ್ಲಾ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆಯನ್ನು ಕಮಿಟಿಯ ಸದಸ್ಯರು ಮಾಡಿದರು
ಈ ಸಂದರ್ಭದಲ್ಲಿ ಲಕ್ಕವ್ವದೇವಿ ಅರ್ಚಕರಾದ ಹಾಲಪ್ಪ ನಾಗಪ್ಪ ಮುರಾರಿ ,ಸತ್ಯಪ್ಪ ಕೋಳಿಗುಡ್ಡ ,ಬಸಪ್ಪ ತೇರದಾಳ ,ಸೀಮಂತ್ ಸತ್ತಿಗೇರಿ, ಸದಾಶಿವ ತೇಲಿ, ಹಣಮಂತ ಚಿನಗುಂಡಿ, ಶಿವಲಿಂಗ ಚಿನಗುಂಡಿ, ಮಹಾಂತೇಶ್ ಮಿರ್ಜಿ, ಫಕೀರಪ್ಪ ದೊಡ್ಡಮನಿ, ಶ್ರೀಶೈಲ ಚಿನಗುಂಡಿ, ಶಿವಲಿಂಗ ಚಿನಗುಂಡಿ ,ಬಸ್ಸು ಸರಪಣಿ ಹಾಗೂ ಗ್ರಾಮದ ಗ್ರಾಮಸ್ಥರು ಸೇರಿದಂತೆ ಇನ್ನೂ ಅನೇಕ ಭಕ್ತರು ಭಾಗಿಯಾಗಿ ದೇವಿ ಆಶೀರ್ವಾದವನ್ನು ಪಡೆದುಕೊಂಡರು .
ಪ್ರತಿನಿಧಿ ಪ್ರದೀಪ್ ನಡುವಿನಮನಿ. ಬೆಂಗಳೂರು ಹಾಟ್ ನ್ಯೂಸ್ ಸುದ್ದಿವಾಹಿನಿ ರಾಯಬಾಗ್
0 Comments
Please share your comment