ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಕೆ ಎಚ್ ಡಿ ಸಿ ಕಾಲೋನಿಯ ಶಿಸ್ತು ಕಾಣದ ಸರಕಾರಿ ಶಾಲೆ | BHN

BHN

ಬಾಗಲಕೋಟೆ 


ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಕೆ ಎಚ್ ಡಿ ಸಿ ಕಾಲೋನಿಯ ಶಿಸ್ತು ಕಾಣದ ಸರಕಾರಿ ಶಾಲೆ....

ಹೌದು ವೀಕ್ಷಕರೇ ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರ ಮನೆಯ ಪಕ್ಕದಲ್ಲಿ ಇರುವ ಸರಕಾರಿ ಶಾಲೆ ಒಂದರಲ್ಲಿ ಸ್ವಚ್ಛತೆ ಇಲ್ಲ ಎಲ್ಲಿ ನೋಡಿದರೂ ಗಲೀಜು ಕಸದ ರಾಶಿ...

ಈ ಶಾಲೆಯ ಬಗ್ಗೆ ತಲೆಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು..

ಮುಂದಿನ ದಿನಗಳಲ್ಲಿ ಮಕ್ಕಳಿಗೆ ಏನಾದರೂ ಅಪಾಯ ಆಗುವಷ್ಟರಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕಾಳಜಿ ವಹಿಸಬೇಕು...

ಕ್ಷೇತ್ರದ ಶಾಸಕರ ಮನೆ ಪಕ್ಕದಲ್ಲಿಯೇ ಈ ರೀತಿ ಆದರೆ ಇನ್ನೂ ಎಲ್ಲೆಲ್ಲಿ ಯಾವ ಯಾವ ರೀತಿ ತೊಂದರೆ ಇದೆಯೋ ಅನ್ನುವ ಅನುಮಾನ ಮೂಡುತ್ತಿದೆ...

ಅದು ಏನೇ ಆಗಿರಲಿ ಮಕ್ಕಳ ಜೀವದ ಜೊತೆ ಆಟವಾಡಬೇಡಿ ಆದಷ್ಟು ಬೇಗನೆ ಇತ್ತಕಡೆ ಸ್ವಚ್ಛತಾ ಕಾರ್ಯಕ್ರಮವನ್ನು ಪ್ರಾರಂಭಿಸಿ ಎಂದು ಜನಾಭಿಪ್ರಾಯ.

ವರದಿ. BHN ನ್ಯೂಸ್ ಪ್ರದೀಪ್ ನಡುವಿನಮನಿ ಬಾಗಲಕೋಟೆ