ಮಕ್ಕಳ ಹಕ್ಕುಗಳ ರಕ್ಷಣಾ ಜಾಗೃತಿ ಕಾರ್ಯಕ್ರಮ  | BHNಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ. ಸಮಾಜ ಕಾರ್ಯ ವಿಭಾಗ ಹಾಗೂ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ ಇವರ ಸಹಯೋಗದಲ್ಲಿ ಇವತ್ತು ಮಕ್ಕಳ ಹಕ್ಕುಗಳ ಸಂರಕ್ಷಣಾ ಜಾಗೃತಿ ಕಾರ್ಯಕ್ರಮವನ್ನು ಅಭಿನವ ವಿದ್ಯಾ ಸಂಸ್ಥೆ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಂದಿನ ಈ ಕಾರ್ಯಕ್ರಮದ ಅಧ್ಯಕ್ಷರು ಶಬಾನ ಚಿತ್ತರಗಿ. ಮುಖ್ಯೋಪಾಧ್ಯಾಯರು ಅಭಿನವ ವಿದ್ಯಾಸಂಸ್ಥೆ ವಿಜಯಪುರ ಇವರು ವಹಿಸಿದರು. ಈ ಸಭೆಯ ಉದ್ಘಾಟ ಉದ್ಘಾಟಕರಾದ.

ಮೋಹನ್ ದಳವಾಯಿ ಅಧ್ಯಕ್ಷರು ಅಭಿನವ ವಿದ್ಯಾ ಸಂಸ್ಥೆ ವಿಜಯಪುರ. ಇವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಇವರು ಮಕ್ಕಳಿಗೆ ನೀಡಿರುವ ಸಂವಿಧಾನಿಕ ಹಕ್ಕುಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಬಶೀರ್ ಫ್ರೆಂಡಾರಿ ಆಪ್ತ ಸಮಾಲೋಚಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ ಇವರು ವಹಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕ್ರಮಗಳ ಕುರಿತು ತಿಳಿಸಿದರು. ಈ ಘಟಕವು 18 ವರ್ಷದೊಳಗಿನ ಮಕ್ಕಳಿಗೆ. ಪಾಲನೆ ಪೋಷಣೆ ಹಾಗೂ ರಕ್ಷಣೆಯನ್ನು ಮಾಡುವ ಗುರಿ ಹೊಂದಿದೆ. 

ಈ ಘಟಕದ ಅಡಿಯಲ್ಲಿರುವ ಇರುವ ಸಾಂಸ್ಥಿಕ ಸಂಸ್ಥೆಗಳಿವೆ ಎಂದು ತಿಳಿಸಿದರು. ಹೆಣ್ಣು ಮಗು ಹಾಗೂ ಗಂಡು ಮಗುವಿಗೆ ಪ್ರತ್ಯೇಕವಾದಂತ ಬಾಲ ಮಂದಿರಗಳಿವೆ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗಾಗಿ ವೀಕ್ಷಣಾಲಯವಿದೆ ಎಂದು ಹೇಳಿದರು. ಬಾಲ್ಯ ವಿವಾಹಕ್ಕೆ ಒಳಗಾಗುವ ಮಕ್ಕಳು ರಕ್ಷಣೆ. ಬಾಲ ಕಾರ್ಮಿಕಕ್ಕೆ ಒಳಪಟ್ಟ ಮಕ್ಕಳ ರಕ್ಷಣೆ. ಸಾಗಾಣಿಕೆ.

ಪೋಕ್ಸೋ. ಏಕ ಪೋಷಕ ಮಕ್ಕಳ ರಕ್ಷಣೆ. ಪ್ರಯೋಜಕತ್ವ ಯೋಜನೆ. ವಿಶೇಷ ಪಾಲನಾ ಯೋಜನೆ, ಕುರಿತು ತಿಳಿಸಿದರು. ಈ ಕಾರ್ಯಕ್ರಮದ ಅತಿಥಿಗಳಾದಂತ. ಡಾ/ಕಲಾವತಿ ಕಾಂಬಳೆ ಸಹಾಯಕ ಪ್ರಾಧ್ಯಾಪಕರು ಸಮಾಜಕಾರ್ಯ ವಿಭಾಗ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ. ಇವರು ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸುರಕ್ಷಿತ ಸ್ಪರ್ಶ ಯಾವುದು ಹಾಗೂ ಅಸುರಕ್ಷಿತ ಸ್ಪರ್ಶ ಯಾವುದು ಎಂದು ಮಕ್ಕಳಿಗೆ ಹೇಳಿಕೊಟ್ಟರು. ಈ ಕಾರ್ಯಕ್ರಮದ ನಿರೂಪಣೆ. ರುಬಿನಾ ನದಾಫ್. ಸ್ವಾಗತ. ಸನಾ ಕಸಬ. ಪ್ರಾಸ್ತಾವಿಕ ನುಡಿ. ವಿದ್ಯಾಶ್ರೀ ಮಾಂಗ. ವಂದನಾರ್ಪಣೆ. ಪುಷ್ಪ ತೊಲೆ. ಮತ್ತು ಈ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಉಕ್ಕಲಿ ಹಾಗೂ ಅಭಿನವ ವಿದ್ಯಾ ಸಂಸ್ಥೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವರದಿ. ಪ್ರದೀಪ್ ನಡುವಿನಮನಿ ಬೆಂಗಳೂರು ಹಾಟ್ ನ್ಯೂಸ್.( BHN ) ವಿಜಯಪುರ.