ಬಡಜನರ ಜೀವದ ಜೊತೆ ಆಟವಾಡುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯರು | BHNಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರ ನಿರ್ಲಕ್ಷದಿಂದ ಗಲೀಜಾಗಿ ಗಬ್ಬೆದ್ದು ನಾರುತ್ತಿರುವ ಶೌಚಾಲಯ

ಆಸಂಗಿಯಿಂದ ಅಸ್ಕಿ ಮಾರ್ಗಕ್ಕೆ ತೆರಳುವ ರಸ್ತೆಯ ಮಹಾವೀರ್ ಸರ್ಕಲ್ ಪಕ್ಕ ಇರುವ ಶೌಚಾಲಯ ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾದ ಗ್ರಾಮ ಪಂಚಾಯಿತಿ ಮೆಂಬರ್ಸ್.....

ಶೌಚಾಲಯ ಅಕ್ಕ ಪಕ್ಕದಲ್ಲಿ ನೂರಾರು ಬಡ ಕುಟುಂಬಗಳು ವಾಸವಿದ್ದು ಇದರಿಂದ ಬೇಸತ್ತು ಹೋದ ಆಸಂಗಿ ಗ್ರಾಮದ ಬಡಜನ

ಭಾರತ ದೇಶದ ತುಂಬಾ ಸ್ವಚ್ಛ ಭಾರತ ಅಭಿಯಾನ.....
ಆದರೆ ಇಲ್ಲಿ ನೋಡಿದರೆ ಸ್ವಚ್ಛತೆ ಇಲ್ಲದೆ ಗಲೀಜು ಅಭಿಯಾನ...

ಈ ಗಲೀಜು ದುರ್ವಾಸನೆಯಿಂದ ಮುಕ್ತಿ ಯಾವಾಗ ಸಿಗತ್ತೆ ಅಂತ ಬಡಜನರು ಎದುರು ನೋಡುತ್ತಿದ್ದಾರೆ....

ಇನ್ನು ಮುಂದಾದರೂ ಈ ವರದಿ ನೋಡಿ ಈ ಆಸಂಗಿ ಗ್ರಾಮ ಪಂಚಾಯತಿ ಸದಸ್ಯರು ಈ ಗಲೀಜು ಅಭಿಯಾನ ಬಿಟ್ಟು ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಲಿ ಎಂದು ಈ ವರದಿ ಮೂಲಕ ಕೇಳಿಕೊಳ್ಳುತ್ತಿದ್ದೇವೆ.......

 BHN ನ್ಯೂಸ್. ಪ್ರದೀಪ್ ನಡುನಮನಿ ಬಾಗಲಕೋಟೆ