``ತೇಜಸ್ವಿ ಸೂರ್ಯ ಅವರಿಗೆ `ಹಿಂದು' ಅಲ್ಲದ ಸಮುದಾಯಗಳ ಕುರಿತಂತೆ ಸ್ಪಷ್ಟವಾಗಿ ವಿಭಜನಾತ್ಮಕ ಅಜೆಂಡಾವಿದೆ. ಯುರೋಪಿಯನ್ ಸಿದ್ಧಾಂತಗಳಾದ ಸಮಾನತೆ, ವೈವಿಧ್ಯತೆ ಹಾಗೂ ಸರ್ವರನ್ನೂ ಒಳಗೊಳ್ಳುವ ಸಿದ್ಧಾಂತಕ್ಕೆ ಅವರ ಈ ಅಜೆಂಡಾ ವಿರುದ್ಧವಾಗಿದೆ. ಅವರ ನಿಲುವು ವಿವಿಧ ಅಂತಾರಾಷ್ಟ್ರೀಯ ಕಾನೂನುಗಳಿಗೂ ಹಾಗೂ ಇಯು ಚಾರ್ಟರ್ ಆಫ್ ಫಂಡಮೆಂಟಲ್ ರೈಟ್ಸ್‍ಗೂ ವಿರುದ್ಧವಾಗಿದೆ,'' ಎಂದು ಭಾರತೀಯ ಕಾನ್ಸುಲೇಟ್‍ಗೆ ಬರೆದ ಪತ್ರದಲ್ಲಿ ಹಲವು ಸಂಘಟನೆಗಳು ಹೇಳಿವೆ.
ಈ ಪತ್ರಕ್ಕೆ ಸಹಿ ಹಾಕಿದ ಸಂಘಟನೆಗಳಲ್ಲಿ ಇಂಡಿಯಾ ಸಾಲಿಡಾರಿಟಿ ಜರ್ಮನಿ, ದಿ ಹ್ಯೂಮನಿಸಂ ಪ್ರಾಜೆಕ್ಟ್, ಸಾಲಿಡಾರಿಟಿ ಬೆಲ್ಜಿಯಂ, ಇಂಡಿಯನ್ಸ್ ಅಗೇನ್ಸ್ಟ್ ಸಿಎಎ, ಎನ್ ಆರ್‍ಸಿ ಎಂಡ್ ಎನ್‍ಪಿಆರ್-ಫಿನ್‍ಲ್ಯಾಂಡ್, ಭಾರತದ ಡೆಮಾಕ್ರೆಸಿ ವಾಚ್, ಇಂಡಿಯನ್ ಅಲಾಯನ್ಸ್ ಪ್ಯಾರಿಸ್ ಹಾಗೂ ಫೌಂಡೇಶನ್ ದಿ ಲಂಡನ್ ಸ್ಟೋರಿ ಸೇರಿವೆ.
ತೇಜಸ್ವಿ ಸೂರ್ಯ ಅವರು ಮಾಡಿರುವ ಕೆಲವು ಆಕ್ಷೇಪಾರ್ಹ ಟ್ವೀಟ್‍ಗಳು ಹಾಗೂ ಸಿಎಎ ಪ್ರತಿಭಟನೆಗಳ ಕುರಿತಂತೆ ಅವರ ಹೇಳಿಕೆಗಳನ್ನೂ ಈ ಪತ್ರ ಉಲ್ಲೇಖಿಸಿದೆ. ``ಮೋದಿಯ ವಿರುದ್ಧ ಇರುವವರು ದೇಶವಿರೋಧಿಗಳು ಎಂದು ಸಾರ್ವಜನಿಕವಾಗಿ ಹೇಳಿದ ವ್ಯಕ್ತಿ ಇವರು. ಇಂತಹ ಹೇಳಿಕೆಗಳನ್ನು ನೀಡುವುದಕ್ಕೆ ಒಬ್ಬ ಸಂಸದನಿಗೆ ನಾಚಿಕೆಗೇಡು,'' ಎಂದು ಪತ್ರದಲ್ಲಿ ಹೇಳಲಾಗಿದೆ.
Bangalore Hot News
0 Comments
Please share your comment