ಪ್ರಯಾಣ ಭತ್ಯೆ, ಮನೆ ಬಾಡಿಗೆಗೆ ಆದಾಯ ತೆರಿಗೆ ಕಟ್ಟ ಬೇಕಾಗಬಹುದು ಎನ್ನಲಾಗಿದೆ. ಕೊರೋನಾ ಕಾರಣದಿಂದ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ಇದರಿಂದಾಗಿ ಉದ್ಯೋಗಿಗಳಿಗೆ ಹೆಚ್ಚಿನ ಉಳಿತಾಯವಾಗುತ್ತಿದೆ. ಪ್ರಯಾಣದ ವೆಚ್ಚ ಇಲ್ಲ, ಹೆಚ್ಚಿನವರಿಗೆ ಮನೆ ಬಾಡಿಗೆ ಇಲ್ಲ ಮತ್ತು ಹೊರಗೆ ಊಟ-ತಿಂಡಿ ಮಾಡುವುದರ ಖರ್ಚು ಕೂಡ ಉಳಿಯುತ್ತಿದ್ದು ಈ ವರ್ಷ ಉದ್ಯೋಗಿಗಳು ಹೆಚ್ಚಿನ ತೆರಿಗೆ ಪಾವತಿಸಬೇಕಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಹುತೇಕ ನೌಕರರು ನಗರಪ್ರದೇಶದ ಬಾಡಿಗೆ ಮನೆ ತೊರೆದು ಗ್ರಾಮಾಂತರ ಪ್ರದೇಶಕ್ಕೆ ತೆರಳಿದ್ದಾರೆ. ಬಾಡಿಗೆ ಪಾವತಿಸುತ್ತಿಲ್ಲದ ಕಾರಣ ಬಾಡಿಗೆಗೆ ತೆರಿಗೆ ಕಟ್ಟಬೇಕಿದೆ
ಪ್ರಯಾಣ ಭತ್ಯೆ ಖರ್ಚಾಗಿದ್ದರೆ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತಿತ್ತು. ಈಗ ಪ್ರಯಾಣ ಭತ್ಯೆಯೂ ಉಳಿಯುವುದರಿಂದ ತೆರಿಗೆ ರಿಟರ್ನ್ಸ್ ಸಲ್ಲಿಸುವ ವೇಳೆ ಮಾಹಿತಿ ನೀಡಬೇಕಿದೆ. ಹೀಗಾಗಿ ಪ್ರಯಾಣ ಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆಗೆ ಆದಾಯ ತೆರಿಗೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Bangalore Hot News
0 Comments
Please share your comment