ದೇಶದಲ್ಲಿ ಬರೆಯಲು, ಮಾತನಾಡಲು, ಪ್ರಶ್ನೆಗಳನ್ನು ಕೇಳಲು ಸ್ವಾತಂತ್ರ್ಯವಿದೆಯೇ?: ಸೋನಿಯಾ ಗಾಂಧಿ

sonia gandhi

 ಹೊಸದಿಲ್ಲಿ: ಇದು ಭಾರತದ ಪ್ರಜಾಪ್ರಭುತ್ವಕ್ಕೆ ಅಗ್ನಿಪರೀಕ್ಷೆಯ ದಿನಗಳು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಈಗಿನ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆ, ಸಾಂವಿಧಾನಿಯ ಮೌಲ್ಯ ಮತ್ತು ಸ್ಥಾಪಿತ ಸಂಪ್ರದಾಯಗಳ ವಿರುದ್ಧವಾಗಿ ಸಾಗುತ್ತಿದೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಪರೀಕ್ಷೆಯ ಕಾಲ” ಎಂದರು.

 “ ಬರೆಯಲು, ಮಾತನಾಡಲು, ಪ್ರಶ್ನೆಗಳನ್ನು ಕೇಳಲು ಮತ್ತು ಅಸಮ್ಮತಿಗೆ ಈಗ ದೇಶದಲ್ಲಿ ಸ್ವಾತಂತ್ರ್ಯವಿದೆಯೇ?, ಜವಾಬ್ದಾರಿಯುತ ವಿಪಕ್ಷವಾಗಿಭಾರತದ ಪ್ರಜಾಪ್ರಭುತ್ವವನ್ನು ಸ್ವತಂತ್ರವಾಗಿ ಇರುವಂತೆ ಮಾಡಲು ಎಲ್ಲಾ ಪ್ರಯತ್ನಗಳು ಮತ್ತು ಹೋರಾಟಗಳನ್ನು ನಡೆಸುವುದು ನಮ್ಮ ಜವಾಬ್ದಾರಿಯಾಗಿದೆ" ಎಂದವರು ಹೇಳಿದ್ದಾರೆ.

Bangalore Hot News