kims hospital bangalore

ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ  ಆಕ್ಸಿಜನ್ ಸಮಸ್ಯೆಯಿಂದ 350 ಕ್ಕೂ ಹೆಚ್ಚು ರೋಗಿಗಳು ಪರದಾಡಿದ ಘಟನೆ ಇಂದು ವರದಿಯಾಗಿದೆ.ರೋಗಿಗಳನ್ನು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ.

ಸಕಾಲದಲ್ಲಿ ಆಕ್ಸಿಜನ್ ಪೂರೈಕೆಯಾಗದ ಹಿನ್ನೆಲೆ ಈ ಸಮಸ್ಯೆಯಾಗಿದ್ದು, ಆಕ್ಸಿಜನ್ ಸಮಸ್ಯೆಯಿಂದ 350 ಕ್ಕೂ ಹೆಚ್ಚು ರೋಗಿಗಳು ಪರದಾಡಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಏಜೆನ್ಸಿಯವರಿಂದ ಆಕ್ಸಿಜನ್ ವಿತರಣೆಯಾಗುತ್ತಿತ್ತು, ಆದರೆ ಸಕಾಲದಲ್ಲಿ ಏಜೆನ್ಸಿಯವರಿಂದ ಆಕ್ಸಿಜನ್ ವಿತರಣೆಯಾಗದ ಹಿನ್ನೆಲೆ ಈ ಸಮಸ್ಯೆ ಸೃಷ್ಟಿಯಾಗಿದೆ.

ಆಸ್ಪತ್ರೆಯಲ್ಲಿದ್ದ 350 ಕ್ಕೂ ಹೆಚ್ಚು ರೋಗಿಗಳಿಗೆ ಅಪಾಯವಾಗಿದ್ದು, ಕಿಮ್ಸ್ ಎದುರು ಸಾಲು ಸಾಲು ಆಂಬಲೆನ್ಸ್ ಗಳು ನಿಂತಿದ್ದು, ರೋಗಿಗಳನ್ನು ಬೇರೆ ಆಸ್ಪತ್ರೆಗೆ ಶಿಫ್ಟಿಂಗ್ ಮಾಡುವ ಕೆಲಸ ನಡೆದಿದೆ.

Bangalore Hot News