ಫೇಸ್ ಬುಕ್ 700 ಬಿಜೆಪಿ ಪರ ಪೇಜ್ ಗಳನ್ನು ತೆಗೆದುಹಾಕಿದೆ ?

facebook

ಹೊಸದಿಲ್ಲಿ:  ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಗೆ ಮುನ್ನ ಸುಮಾರು 700 ಪುಟಗಳನ್ನು ಫೇಸ್ ಬುಕ್ ತೆಗೆದು ಹಾಕಿದೆ ಎಂದು  ಬಿಜೆಪಿ ಆರೋಪಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಫೇಸ್ ಬುಕ್, ತಾನು ಹಿಂಸೆಯನ್ನು ಪ್ರಚೋದಿಸುವ ಬರಹಗಳು ಹಾಗೂ ಭಾಷಣಗಳನ್ನು ಅನುಮತಿಸುವುದಿಲ್ಲ ಎಂದು ಹೇಳಿದೆ.

ರವಿವಾರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಅವರು ಮಾತನಾಡುತ್ತಾ ಮೇಲಿನ ಆರೋಪ ಮಾಡಿದ್ದರು. ಫೇಸ್ ಬುಕ್ ಬಿಜೆಪಿ ಪರ ಇದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದೂ ಅವರು  ಹೇಳಿದ್ದರು.

ವಾಲ್ ಸ್ಟ್ರೀಟ್ ಜರ್ನಲ್ ‍ನಲ್ಲಿ ಪ್ರಕಟಗೊಂಡ ವರದಿಯಲ್ಲಿ ಬಿಜೆಪಿ ನಾಯಕರೊಬ್ಬರ ಪೋಸ್ಟ್ ಗಳ ವಿರುದ್ಧ ಫೇಸ್ ಬುಕ್ ಕ್ರಮ ಕೈಗೊಳ್ಳುವುದರಿಂದ ಹಿಂದೆ ಜಾರಿತ್ತು ಎಂದು ಬರೆಯಲಾಗಿರುವ ಹಿನ್ನೆಲೆಯಲ್ಲಿ ಮಾಳವಿಯ ಹೇಳಿಕೆ ಬಂದಿತ್ತು.

ಸುಮಾರು 700 ಪುಟಗಳನ್ನು ಫೇಸ್ ಬುಕ್ ತೆಗೆದು ಹಾಕಿರುವ ವಿಚಾರದ ಕುರಿತಂತೆ ಯಾವುದೇ ಇತ್ಯರ್ಥವಾಗಿಲ್ಲ, ಆದುದರಿಂದ ಫೇಸ್ ಬುಕ್ ಬಿಜೆಪಿ ಪರ ವಾಲಿದೆ ಎಂಬುದು ಖಂಡಿತವಾಗಿಯೂ ಸುಳ್ಳು'' ಎಂದು ಮಾಳವಿಯ ಹೇಳಿದ್ದರು.

Bangalore Hot News