ಶಬರಿಮಲೆ ಅಯ್ಯಪ್ಪ ದೇವಸ್ಥಾನ ಇಂದಿನಿಂದ 5 ದಿನ ತೆರೆದಿರುತ್ತೆ

Sabarimala

ಪಟ್ಟಣಂತಿಟ್ಟ, ಆ.17 : ವಿಶ್ವವಿಖ್ಯಾತ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲನ್ನು ಐದು ದಿನಗಳ ಮಾಸಿಕ ವಿಶೇಷ ಪೂಜೆಗಾಗಿ ಇಂದು ಬೆಳಗ್ಗೆ ತೆರೆಯಲಾಗಿದೆ.

ಮಲೆಯಾಳಂ ಪಂಚಾಂಗದ ಪ್ರಕಾರ ಇಂದಿನಿಂದ ಆಗಸ್ಟ್ 21ರ ವರೆಗೆ ಅಯ್ಯಪ್ಪ ಸ್ವಾಮಿಗೆ ಮಾಸಿಕ ವಿಶೇಷ ಪೂಜೆ ನೆರವೇರಿಸಲಾಗುತ್ತದೆ ಎಂದು ಟ್ರವಾಂಕುರ್ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಎನ್.ವಾಸು ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡುವವರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಹಾಜರುಪಡಿಸಬೇಕು. ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇವಸ್ಥಾನವು ಕಟ್ಟುನಿಟ್ಟಿನ ನಿಬಂಧನೆಗಳನ್ನು ಜಾರಿಗೊಳಿಸಿದೆ.

ಆ.21ರಂದು ಸಂಜೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ ಮತ್ತೆ ಓಣಂ ಪ್ರಯುಕ್ತ ಆ.29 ರಿಂದ ಸೆ.2ರ ವರೆಗೆ ದೇವಸ್ಥಾನವನ್ನು ತೆರೆಯಲಾಗುತ್ತದೆ
ವಾರ್ಷಿಕ ಶಬರಿ ಮಲೆ ಯಾತ್ರೆ ನ.16ರಿಂದ ಆರಂಭವಾಗಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.

Bangalore Hot News