PUC Exam karnataka

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಸೆಪ್ಟಂಬರ್ 7 ರಿಂದ 19 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ.

ಈ ಮೊದಲು ಸೆಪ್ಟಂಬರ್ 7 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಬೇಕಿತ್ತು. ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ ಸೆಪ್ಟಂಬರ್ 7 ರಿಂದ 19 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ. ತಾಂತ್ರಿಕ ಕಾರಣಗಳಿಂದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ಹೇಳಲಾಗಿದೆ
ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕಿ ಕನಗವಲ್ಲಿ ಮಾಹಿತಿ ನೀಡಿದ್ದು, ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 19ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ. ಈ ಮೊದಲು ನಿಗದಿಯಾಗಿದ್ದಂತೆ ವೇಳಾಪಟ್ಟಿಯಲ್ಲಿ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ ಎಂಬುದಾಗಿ ತಿಳಿಸಿದರು.

ಪರಿಷ್ಕೃತ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ

ಸೆಪ್ಟಂಬರ್ 7 ರಂದು ಬೆಳಿಗ್ಗೆ: ಉರ್ದು, ಸಂಸ್ಕೃತ, (ಮಧ್ಯಾಹ್ನ: ಮಾಹಿತಿ ತಂತ್ರಜ್ಞಾನ, ರೀಟೈಲ್ ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ನೆಸ್ ಹಾಗೂ ಗೃಹಚವಿಜ್ಞಾನ)
ಸೆಪ್ಟೆಂಬರ್ 8 ರಂದು ಬೆಳಗ್ಗೆ: ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
ಸೆಪ್ಟೆಂಬರ್ 9 ರಂದು ಬೆಳಗ್ಗೆ: ಹಿಂದಿ ಮಧ್ಯಾಹ್ನ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್)
ಸೆಪ್ಟೆಂಬರ್ 10 ರಂದು ಬೆಳಗ್ಗೆ: ಇಂಗ್ಲಿಷ್
ಸೆಪ್ಟಂಬರ್ 11 ರಂದು ಬೆಳಗ್ಗೆ: ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಗಣಕವಿಜ್ಞಾನ, (ಮಧ್ಯಾಹ್ನ: ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಭೂಗರ್ಭಶಾಸ್ತ್ರ)
ಸೆಪ್ಟಂಬರ್ 12 ರಂದು ಬೆಳಗ್ಗೆ: ಅರ್ಥಶಾಸ್ತ್ರ, ಭೌತಶಾಸ್ತ್ರ
ಸೆಪ್ಟಂಬರ್ 13 ರಂದು ಭಾನುವಾರ ರಜಾದಿನ
ಸೆಪ್ಟಂಬರ್ 14 ರಂದು ಬೆಳಗ್ಗೆ: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ, ಶಿಕ್ಷಣ
ಸೆಪ್ಟಂಬರ್ 15 ರಂದು ಬೆಳಗ್ಗೆ: ಕನ್ನಡ
ಸೆಪ್ಟೆಂಬರ್ 16 ರಂದು ಬೆಳಗ್ಗೆ: ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್
ಸೆಪ್ಟೆಂಬರ್ 17 ಗುರುವಾರ ಮಹಾಲಯ ಅಮಾವಾಸೆ
ಸೆಪ್ಟೆಂಬರ್ 18 ರಂದು ಬೆಳಗ್ಗೆ: ಸಮಾಜಶಾಸ್ತ್ರ, ಲೆಕ್ಕಶಾಸತ್ರ, ಗಣಿತ
ಸೆಪ್ಟಂಬರ್ 19 ರಂದು ಬೆಳಗ್ಗೆ: ಭೂಗೋಳಶಾಸ್ತ್ರ, (ಮಧ್ಯಾಹ್ನ: ಮನಃಶಾಸ್ತ್ರ)

Bangalore Hot News