ಮದುವೆ ವಯಸ್ಸು ಬದಲಾವಣೆ ಸುಳಿವು ನೀಡಿದ ಪ್ರಧಾನಿ ಮೋದಿ!

wedding

ನವದೆಹಲಿ(ಆ.16): ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ನಿರ್ಧಾರಕ್ಕೆ ಮುಂದಾಗಿದ್ದಾರೆ. ಭಾರತದಲ್ಲಿ ಹೆಣ್ಣುಮಕ್ಕಳ ಮದುವೆ ವಯಸ್ಸು ಕನಿಷ್ಠ 18. ಗಂಡಿಗೆ 21. ಇದರಲ್ಲಿ ಹೆಣ್ಣುಮಕ್ಕಳ ಮದುವೆ ಕನಿಷ್ಠ ವಯಸ್ಸು ಬದಲಾವಣೆ ಮಾಡಲು ಮೋದಿ ನಿರ್ಧರಿಸಿದ್ದಾರೆ. ಇದಕ್ಕಾಗಿ ಸಮಿತಿಯೊಂದು ರಚಿಸಲಾಗಿದೆ. ಈ ಸಮಿತಿ ಸೂಚಿಸುವ ವಯಸ್ಸನ್ನು ನಿಗಧಿ ಪಡಿಸಲು ಮೋದಿ ನಿರ್ಧರಿಸಿದ್ದಾರೆ.

ಸ್ತ್ರೀಯರ ಕನಿಷ್ಠ ವಿವಾಹ ವಯಸ್ಸು ಬದಲಾಗುತ್ತಾ?.

ಹೆಣ್ಣು ಮಕ್ಕಳ ಮದುವೆ ವಯಸ್ಸು ಬದಲಾವಣೆಗೆ ಪ್ರಮುಖ ಕಾರಣವಿದೆ. 18 ವರ್ಷಕ್ಕೆ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಹುಟ್ಟುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೆಣ್ಣು ಮಕ್ಕಳಲ್ಲಿನ ಆಹಾರ ಕೊರತೆ ಕಾಣಿಸುತ್ತಿದೆ.
 ಆಹಾರ ಕೊರೆತೆಯಿಂದ ಹೆಣ್ಣುಮಕ್ಕಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ಕುರಿತು ಸಮಿತಿ ವರದಿ ನೀಡಲಿದೆ. ಈ ವರದಿ ಆಧರಿಸಿ ಪ್ರಧಾನಿ ಮೋದಿ ಹೆಣ್ಣು ಮಕ್ಕಳ ವಯಸ್ಸು ಬದಲಿಸಲಿದ್ದಾರೆ.

ಭಾರತದಲ್ಲಿ ಪುರುಷರ ಮದುವೆ ವಯಸ್ಸು 18ಕ್ಕೆ ಇಳಿಕೆ!?...

ಪ್ರಮುಖವಾಗಿ ಹೆಣ್ಣು ಮಕ್ಕಳು ತಾಯಿಯಾಗಲು ಕನಿಷ್ಠ ವಯಸ್ಸು ಎಷ್ಟು ಅನ್ನೋದು ಸಮಿತಿ ಹೇಳಲಿದೆ. ಹುಟ್ಟುವ ಮಕ್ಕಳ ಆರೋಗ್ಯ ಹಾಗೂ ತಾಯಿಯ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಸಮಿತಿ ವರದಿ ನೀಡಲಿದೆ. 1929ರಲ್ಲಿ ಭಾರತದಲ್ಲಿ ಹೆಣ್ಣುಮಕ್ಕಳ ಮದುವೆ ವಯಸ್ಸು 15 ವರ್ಷ ಎಂಬ ಕಾನೂನು ರೂಪಿಸಲಾಗಿತ್ತು. 1978ರಲ್ಲಿ ಈ ವಯಸ್ಸನ್ನು 15 ರಿಂದ 18ಕ್ಕೆ ಏರಿಸಲಾಗಿತ್ತು.

Bangalore Hot News