ದೇಶದ ಜಿಡಿಪಿ ಸ್ವಾತಂತ್ರ್ಯದ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಾಖಲಾಗಲಿದೆ: ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ

Narayana Murthy


ನವದೆಹಲಿ: ದೇಶದ ಜಿಡಿಪಿ ಸ್ವಾತಂತ್ರ್ಯದ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಾಖಲಾಗಲಿದೆ ಎಂದು ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್-ಟೆಕ್ನಾಲಜೀಸ್ ಇಂಡಿಯಾ ಡಿಜಿಟಲ್ ಕಾನ್ವರ್ಸೇಷನ್ಸ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ನಾರಾಯಣ ಮೂರ್ತಿ

ಕೊರೋನಾ ಜೊತೆಯಲ್ಲಿಯೇ ಬದುಕುವುದಕ್ಕೆ ಜನರನ್ನು ತಯಾರುಗೊಳಿಸಬೇಕು, ಆರ್ಥಿಕತೆಯನ್ನು ಹಳಿಗೆ ಮರಳಿ ತರುರಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪ್ರತಿ ಕ್ಷೇತ್ರವೂ ಸಹ ಸಂಪೂರ್ಣವಾಗಿ ಕೆಲಸ ಮಾಡುವಂತಹ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಿದೆ. ಭಾರತದ ಜಿಡಿಪಿ ಕನಿಷ್ಟ ಶೇ.5 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಜಿಡಿಪಿ ಬೆಳವಣಿಗೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಕಡಿಮೆಯಾಗುವ ಭಯವಿದೆ ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಮಟ್ಟದಲ್ಲಿ ಜಿಡಿಪಿ ಕಡಿಮೆಯಾಗಿದೆ. ಜಾಗತಿಕ ವ್ಯಾಪಾರ ವಹಿವಾಟುಗಳೂ ಸಹ ಕುಸಿದಿದೆ. ದಿನವೊಂದಕ್ಕೆ 10 ಮಿಲಿಯನ್ ಜನರಿಗೆ ಲಸಿಕೆ ಹಾಕಿದರೂ ಸಹ ಎಲ್ಲಾ ಭಾರತೀಯರಿಗೂ ಲಸಿಕೆ ಹಾಕುವುದಕ್ಕೆ 140 ದಿನಗಳಾಗುತ್ತವೆ. ಇದು ಕೊರೋನಾ ತಡೆಗೆ ದೀರ್ಘಾವಧಿಯಾಗುತ್ತದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

Bangalore Hot News