KGF-2

ಬೆಂಗಳೂರು: ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಸಿನಿಮಾ ‘ಕೆಜಿಎಫ್ ಚಾಪ್ಟರ್-2’ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ.

ಕೊರೊನಾ ಅಟ್ಟಹಾಸ, ಲಾಕ್‍ಡೌನ್‍ನಿಂದಾಗಿ ಬರೋಬ್ಬರಿ ನಾಲ್ಕು ತಿಂಗಳು ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು. ಕಳೆದೊಂದು ತಿಂಗಳ ಹಿಂದೆ ಸರ್ಕಾರ ಶೂಟಿಂಗ್‍ಗೆ ಅನುಮತಿ ಸಿಕ್ಕಿದ್ದು, ಕೆಜಿಎಫ್ ಬಳಗ ಇಂದಿನಿಂದ ಚಿತ್ರೀಕರಣಕ್ಕೆ ಹಾಜರಾಗಿದೆ.

ಮಿನರ್ವ ಮಿಲ್‍ನಲ್ಲಿ ಹಾಕಲಾಗಿರುವ ಅದ್ಧೂರಿ ಸೆಟ್‍ನಲ್ಲಿ ಚಿತ್ರೀಕರಣವನ್ನು ಶುರು ಮಾಡಲಾಗಿದೆ. ಇದೀಗ ಕೆಜಿಎಫ್ ಚಿತ್ರತಂಡಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಹೊಸದಾಗಿ ಸೇರಿಕೊಂಡಿದ್ದಾರೆ. ಆದರೆ ಪ್ರಕಾಶ್ ರೈ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಚಿತ್ರರಂಡ ರಿವೀಲ್ ಮಾಡಿಲ್ಲ.

Bangalore Hot News