ಡಿಜೆ ಹಳ್ಳಿ ಗಲಭೆ ಪ್ರಕರಣ: ಸಿಐಡಿ ತನಿಖೆಗೆ ಸರ್ಕಾರದ ಚಿಂತನೆ..!
ಬೆಂಗಳೂರು: ಡಿಜೆ ಹಳ್ಳಿಯಲ್ಲಿ ಬೆಚ್ಚಿ ಬೀಳುವ ಗಲಭೆ, ಹಿಂಸಾಚಾರ ಘಟನೆ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣದ ತನಿಖೆಯನ್ನು ಎಸ್ಐಟಿ ಅಥವಾ ಸಿಐಡಿಗೆ ವಹಿಸುವ ಸಾಧ್ಯತೆ ಇದೆ. ಅದ್ರಂತೆ, ಇಂದು ಸಂಜೆ ನಡೆಯಲಿರುವ ಪ್ರಮುಖ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಅಂದ್ಹಾಗೆ, ಸಿಎಂ ಬಿಎಸ್‌ವೈ ಇಂದು ಸಂಜೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ಡಿಜಿಪಿ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಇನ್ನು ದೇವರಜೀವನಹಳ್ಳಿ ವ್ಯಾಪ್ತಿಯ ಧಾರ್ಮಿಕ ಮುಖಂಡರು, ಸಮಾಜ ಸೇವಕರನ್ನು ಕರೆದಿರುವ ಈ ಸಭೆಯಲ್ಲಿ ಡಿಜೆ ಹಳ್ಳಿ ಪ್ರಕರಣದ ತನಿಖೆಯ ಹೊಣೆಯನ್ನ ಎಸ್ಐಟಿ ಅಥವಾ ಸಿಐಡಿಗೆ ವಹಿಸುವ ತಿರ್ಮಾನ ಕೈಗಳ್ಳಲಾಗುವುದು ಎನ್ನಲಾಗ್ತಿದೆ.
ಹಾಗಾಗಿ ಒಂದೂವರೆ ತಿಂಗಳ ಕಾಲಮಿತಿಯಲ್ಲಿ ತನಿಖೆ ಮಾಡಿ ವರದಿ ಸಲ್ಲಿಸಲು ಆದೇಶಿಸುವ ಸಾಧ್ಯತೆ ಇದೆ.
Bangalore Hot News
0 Comments
Please share your comment