ನನಗೆ ಮದುವೆಯಾಗಿ ಮೂರು ತಿಂಗಳಾಗಿದೆ, ಬಿಟ್ಟುಬಿಡಿ. - ಆರೋಪಿ ನವೀನ್

BHN

ಬೆಂಗಳೂರು: ಡಿ ಜೆ ಹಳ್ಳಿ ಕೆಜಿ ಹಳ್ಳಿ ಗಲಾಟೆಗೆ ಕಾರಣವಾಗಿದ್ದ ವಿವಾದಾತ್ಮಕ ಪೋಸ್ಟ್ ಹಾಕಿದ್ದಾನೆ ಎನ್ನಲಾದ ನವೀನ್​ನನ್ನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನವೀನ್ ನನಗೆ ಮದುವೆಯಾಗಿ ಮೂರು ತಿಂಗಳಷ್ಟೇ ಆಗಿದೆ, ನನ್ನನ್ನು ಬಿಟ್ಟುಬಿಡಿ ಎಂದು ಗೋಗರೆದಿದ್ದಾನಂತೆ.

ನಿನ್ನೆ ಮಹಜರು ಮುಗಿಸಿದ ಅಧಿಕಾರಿಗಳು ವಿಚಾರಣೆಗೆ ಮುಂದಾಗಿದ್ದಾರೆ. ಪೋಸ್ಟ್ ಹಾಕಿ, ನಾನು ಹಾಕಿಲ್ಲ ಎಂದಿದ್ದೀಯಾ.. ಅಲ್ಲದೇ ನಮ್ಮನ್ನ ದಿಕ್ಕು ತಪ್ಪಿಸುವ ನಾಟಕವಾಡಿದ್ದೀಯ ಯಾಕೆ ಎಂದು ಏರು ಧ್ವನಿಯಲ್ಲಿ ಅಧಿಕಾರಿಗಳು ಕೇಳಿದ್ದಾರಂತೆ.. ಈ ವೇಳೆ ತಪ್ಪಾಯ್ತು ಕ್ಷಮಿಸಿ.. ನನಗೆ ಮದುವೆಯಾಗಿ ಮೂರು ತಿಂಗಳಾಗಿದೆ ನನ್ನನ್ನ ಕಳಿಸಿಕೊಡಿ ಎಂದು ನವೀನ್ ಕೇಳಿಕೊಂಡಿದ್ದಾನಂತೆ.

ನೀನು ಹಾಕಿರುವ ಪೋಸ್ಟ್​ನಿಂದ ಹೀಗೆಲ್ಲಾ ಆಗಿದೆ.. ನಿನ್ನ ಮನೆಯೂ ಕೂಡ ಸುಟ್ಟು ಹೋಗಿದೆ ಎಂದು ಹೇಳಿದ್ದಕ್ಕೆ ಮೌನವಾದ ನವೀನ್..

ತಪ್ಪಾಯ್ತು ಅಂತ ಹೇಳಿದ್ದಾನೆ ಎನ್ನಲಾಗಿದೆ. ಇದಾದ ಬಳಿಕ ಯಾವುದೇ ಪ್ರಶ್ನೆಗೂ ನವೀನ್ ಉತ್ತರ ನೀಡುತ್ತಿಲ್ಲ, ಮನೆ ಪರಿಸ್ಥಿತಿ ನೆನದು ಬೇಸರದಿಂದಿದ್ದಾನೆ ಎಂದು ನ್ಯೂಸ್ ಫಸ್ಟ್​ಗೆ ತನಿಖಾ ತಂಡ ಮಾಹಿತಿ ನೀಡಿದೆ.
Bangalore Hot News