ಘಟಪ್ರಭಾ ನದಿಗೆ 70 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬಿಡುತ್ತಿರುವದರಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಡಿಸಿಎಂ ಕಾರಜೋಳ ಮನವಿ 

Govind Karjol

ಬಾಗಲಕೋಟೆ: ಆಗಸ್ಟ 16 : ಘಟಪ್ರಭಾ ಕ್ಯಾಚಮೆಂಟ್ ಏರಿಯಾಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಘಟಪ್ರಭಾ ನದಿಗೆ 70 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬಿಡುತ್ತಿರುವದರಿಂದ ರೈತರು ಹಾಗೂ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ತೆರಹುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ.

ಹಿಡಕಲ್ ಡ್ಯಾಮ್‍ನಿಂದ 40 ಸಾವಿರ, ಹಿರಣ್ಯಕೇಶಿಯಿಂದ 13 ಸಾವಿರ, ಬಳ್ಳಾರಿ ನಾಲೆಯಿಂದ 9 ಸಾವಿರ ಹಾಗೂ ಹಳ್ಳಕೊಳ್ಳಗಳಿಂದ ಒಟ್ಟಾರೆಯಾಗಿ 70 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವದರಿಂದ ರೈತರು ಮತ್ತು ಸಾರ್ವಜನಿಕರು ನದಿಯ ದಡದಲ್ಲಿರುವ ಪಂಪಸೆಟ್, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯುಬೇಕು. ಅಲ್ಲದೇ ಒಕ್ಕಲುತನದ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯುವದರ ಜೊತೆಗೆ ಜಾಗೃತರಾಗಬೇಕು. ಮಳೆ ಹೆಚ್ಚಾಗಿರುವದರಿಂದ ತಮ್ಮ ತಮ್ಮ ಮನೆಯಿಂದ ಸುರಕ್ಷಿತವಾಗಿರುವಂತೆ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ.

Bangalore Hot News