ಯೋಗಿ ಸರ್ಕಾರದ ಸಚಿವ ಹಾಗೂ ಮಾಜಿ ಕ್ರಿಕೆಟರ್ ಚೇತನ್ ಚೌಹಾಣ್ ನಿಧನ

Chetan Chauhan

ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ಸರ್ಕಾರದ ಸಚಿವ ಚೇತನ್ ಚೌಹಾಣ್(73) ಹೃದಯಾಘಾತದಿಂದಾಗಿ ಇಂದು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಚೇತನ್ ಚೌಹಾಣ್ ಗುರುಗ್ರಾಮದ ಮೇದಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಳೆದ ಜುಲೈ ತಿಂಗಳಲ್ಲಿ ಚೌಹಾಣ್​ಗೆ ಕೊರೊನಾ ಪಾಸಿಟಿವ್ ಧೃಢವಾಗಿತ್ತು. ಕಳೆದೊಂದು ತಿಂಗಳಿನಿಂದ ಇವರು ಕೊವಿಡ್-19 ವಿರುದ್ಧ ಹೋರಾಟ ನಡೆಸಿ ಚೇತರಿಸಿಕೊಂಡಿರಲಿಲ್ಲ. ಹೀಗಾಗಿ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್​ರನ್ನ, ಲಖನೌನ ಸಂಜಯ್ ಗಾಂಧಿ ಆಸ್ಪತ್ರೆಯಿಂದ, ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೌಹಾಣ್​ರನ್ನ ವೆಂಟಿಲೇಟರ್ ಸಪೋರ್ಟ್​​ನಲ್ಲಿ ಇಡಲಾಗಿತ್ತು.

ಚೌಹಾಣ್ ಉತ್ತರಪ್ರದೇಶ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಚೇತನ್‌ ಚೌಹಾಣ್‌, ಸೈನಿಕ ಕಲ್ಯಾಣ, ಗೃಹರಕ್ಷಕ ದಳ, ಸಾರ್ವಜನಿಕ ಸಂಪರ್ಕ ಖಾತೆ ಮತ್ತು ನಾಗರಿಕ ರಕ್ಷಣಾ ಸಚಿವರಾಗಿದ್ದರು.

ಕಳೆದ ವರ್ಷದ ತನಕ ರಾಜ್ಯದ ಕ್ರೀಡಾ ಸಚಿವರಾಗಿ, ಚೌಹಾಣ್ ಕರ್ತವ್ಯ ನಿಭಾಯಿಸಿದ್ದರು.
ಇನ್ನು ಚೇತನ್ ಚೌಹಾಣ್ ಭಾರತ ತಂಡದ ಪರ 40 ಟೆಸ್ಟ್​ ಮತ್ತು 7 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಅಲ್ಲದೇ ಚೌಹಾಣ್, ಮಹಾರಾಷ್ಟ್ರ ಮತ್ತು ಡೆಲ್ಲಿ ತಂಡಗಳ ಪರವೂ ರಣಜಿ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. 1981ರಲ್ಲಿ ಚೌಹಾಣ್​ಗೆ, ಅರ್ಜುನ ಪ್ರಶಸ್ತಿ ಸಹ ಲಭಿಸಿತ್ತು.

Bangalore Hot News