BHN

ಮಧ್ಯಪ್ರದೇಶ : ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ಥಳೀಯರಿಗಷ್ಟೇ ಸರ್ಕಾರಿ ಉದ್ಯೋಗ ಎಂಬ ನಿಯಮ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಮತ್ತೊಂದು ಮಹತ್ವದ ಘೋಷಣೆ ಜಾರಿಗೆ ಮುಂದಾಗಿದ್ದಾರೆ.

ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಒಂದು ರೂಪಾಯಿಗೆ ಅಕ್ಕಿ, ಗೋಧಿ, ಉಪ್ಪು ಹಾಗೂ 1.5 ರೂಪಾಯಿಗೆ ಸೀಮೆಎಣ್ಣೆ ನೀಡುವ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಒಂದು ರೂಪಾಯಿಗೆ ಅಕ್ಕಿ, ಗೋಧಿ, ಉಪ್ಪು ಹಾಗೂ 1.5 ರೂಪಾಯಿಗೆ ಸೀಮೆಎಣ್ಣೆ ನೀಡುವುದಾಗಿ ಘೋಷಿಸಿದ್ದಾರೆ.


ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ಬಡವರು ಮತ್ತು ಪಡಿತರ ಚೀಟಿ ಇಲ್ಲದವರಿಗೆ ಒಂದು ರೂಪಾಯಿಗೆ ಅಕ್ಕಿ, ಗೋಧಿ ಹಾಗೂ ಉಪ್ಪು ನೀಡಲಾಗುವುದು. ಸೆಪ್ಟಂಬರ್ 1 ರಿಂದಲೇ ಯೋಜನೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಪ್ರತಿ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯ ನೀಡಲಾಗುವುದು ಎಂದು ಹೇಳಲಾಗಿದೆ.

Bangalore Hot News