ಕೋವಿಡ್-೧೯ ನಿಯಂತ್ರಿಸಲು ಜಿಲ್ಲೆಯಾದ್ಯಂತ ಸರ್ವೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ
ವಿಜಯಪುರ
ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಜಿಲ್ಲೆಯಾದ್ಯಂತ ಹಿರಿಯ ನಾಗರಿಕರು, ಗರ್ಬೀಣಿಯರು, ಎಚ್.ಐ,ವಿ, ಟಿ,ಬಿ, ಡಯಾಬಿಟಿಸ್,ಡಯಾಲಿಸಿಸ್ ರೋಗಿಗಳ ಬಗ್ಗೆ ಹಾಗೂ ಲಕ್ಷಣವುಳ್ಳವರ ಬಗ್ಗೆ ಪಟ್ಟಿ ಮಾಡಿ ಜಿಲ್ಲಾಡಳಿತಕ್ಕೆ ಒದಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋ ಸಭಾಂಗಣದಲ್ಲಿಂದು ಜಿಲ್ಲೆಯ ಶೈಕ್ಷಣಿಕ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ಗ್ರಾಮಿಣ ಭಾಗದಲ್ಲಿ ಪ್ರತಿ ಕುಟುಂಬದ ಆರೋಗ್ಯ ಸರ್ವೆಯನ್ನು ಮಾಡಲು ತಿಳಿಸಿದ ಅವರು ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಲ್ಲಿ ಟಿ.ಬಿ, ಡಯಾಬಿಟಿಸ್ದಂತಹ ರೋಗ ಲಕ್ಷಣಗಳು ಕಂಡುಬಂದಲ್ಲಿ ನೀಡಲಾದ ನಮೂನೆಯಲ್ಲಿ ನೊಂದಣಿ ಮಾಡಿಕೊಳ್ಳಬೇಕು ಹಾಗೂ ಗರ್ಭಿಣಿಯರು, ಎಚ್.ಐ,ವಿ, ಟಿ,ಬಿ, ಡಯಾಬಿಟಿಸ್, ಡಯಾಲಿಸಿಸ್ ರೋಗಿಗಳ ಬಗ್ಗೆ ಹಾಗೂ ಲಕ್ಷಣವುಳ್ಳವರ ಬಗ್ಗೆ ಪಟ್ಟಿ ಮಾಡಿ ಸಿ.ಆರ್ ಪಿ ಅವರಿಗೆ ನೀಡಬೇಕು ಎಂದು ತಿಳಿಸಿದರು.
ಸರ್ವೆಯ ಮೇಲುಸ್ತುವಾರಿಯನ್ನು ಆಯಾ ತಾಲ್ಲೂಕಿನ ತಹಶಿಲ್ದಾರ ಹಾಗೂ ಬಿಇಓಗಳು ನಿರ್ವಹಿಸಬೇಕು ಹಾಗೂ ಕ್ಷೇತ್ರಮಟ್ಟದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮಾಸ್ಕ ಹಾಗೂ ಕೈ ಕವಚವನ್ನು ನೀಡಲಾಗುತ್ತದೆ. ಯಾರು ಭಯದಲ್ಲಿ ಕಾರ್ಯ ನಿರ್ವಹಿಸದೇ ಜಾಗರೂಕರಾಗಿ ಮನೆಯ ಹೊರಗಡೆಯೇ ನಿಂತು ಸರ್ವೆ ಮಾಡುವಂತೆ ಸಲಹೆ ನೀಡಿದರು.
ಸೀಲ್ಡೌನ್ ಮಾಡಲಾಗಿರುವ ನಗರದ ಕೆಲವು ಪ್ರದೇಶಗಳು ಹಾಗೂ ರತ್ನಾಪೂರದ ಸೀಲ್ಡೌನ್ ಮಾಡಲಾದ ಪ್ರದೇಶಗಳಲ್ಲಿ ಈಗಾಗಲೇ ಆರೋಗ್ಯ ಇಲಾಖೆ ವತಿಯಿಂದ ಸರ್ವೆ ಮಾಡಲಾಗಿದ್ದು, ಯಾರೂ ಆ ಪ್ರದೇಶದಲ್ಲಿ ಸರ್ವೇ ಮಾಡುವ ಅವಶ್ಯಕತೆ ಇಲ್ಲ. ವೇಗ ಗತಿಯಲ್ಲಿ ಹರಡುತ್ತಿರುವ ಕೋವಿಡ್-೧೯ ನಿಯಂತ್ರಕ್ಕಾಗಿ ಈ ಸರ್ವೆ ಮಾಡಲಾಗುತ್ತಿದ್ದು ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಸೇರಿದಂತೆ ಶಿಕ್ಷಣ ಇಲಾಖೆಯ ಬಿ.ಇ.ಒ ಹಾಗೂ ಸಿ.ಆರ್ಪಿ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Bangalore Hot News
0 Comments
Please share your comment