ತಬ್ಲಿಘಿಗೆ ಹೋಗಿ ಬಂದವರನ್ನು ಗುಂಡಿಟ್ಟು ಕೊಲ್ಲಿ-ವಿವಾದಾತ್ಮಕ ಹೇಳೆಕ– ರೇಣುಕಾಚಾರ್ಯ

M. P. Renukacharya


ದಾವಣಗೆರೆ: ವೈರಸ್ ಹರಡುತ್ತಿರುವುದು ಒಂದು ರೀತಿಯ ಭಯೋತ್ಪಾದನೆ ಇದ್ದಂತೆ, ಅವರೆಲ್ಲ ದೇಶದ್ರೋಹಿಗಳು. ಹೀಗಾಗಿ ತಬ್ಲಿಘಿ ಸಮಾವೇಶಕ್ಕೆ ಹೋಗಿ ಚಿಕಿತ್ಸೆ ಪಡೆಯವದವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ನಗರದಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು ಆಸ್ಪತ್ರೆಗೆ ಬನ್ನಿ ಎಂದು ಪ್ರಧಾನಿ ಮಂತ್ರಿ, ಮುಖ್ಯಮಂತ್ರಿಗಳು ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಈ ರೀತಿಯಾಗಿ ಮಾಡಿದ್ದಾರೆ. ಲಾಕ್‍ಡೌನ್‍ನಿಂದ ಕೊರೊನಾ ವೈರಸ್ ಕಡಿಯೆಯಾಗುತ್ತಿತ್ತು. ಆದರೆ ಅಲ್ಲಿಂದ ಬಂದವರು ನೇರವಾಗಿ ವೈದ್ಯರ ಬಳಿ ಹೋಗಿದ್ದರೆ ಈ ರೀತಿಯ ಸಮಸ್ಯೆಯಾಗುತ್ತಿರಲಿಲ್ಲ. ಕೆಲವರು ಒಂದು ರೀತಿ ದೇಶದ್ರೋಹದ ಕೆಲಸವನ್ನು ಮಾಡುತ್ತಾರೆ ಎಂದು ಗರಂ ಆಗಿದ್ದಾರೆ. 
ತಬ್ಲಿಘಿ ಸಮಾವೇಶಕ್ಕೆ ಹೋಗಿ ಬಂದವರು ಚಿಕಿತ್ಸೆ ಪಡೆಯದೇ ಎಸ್ಕೇಪ್ ಆಗುತ್ತಿದ್ದರೋ ಅವರನ್ನು ಯಾರೂ ರಕ್ಷಣೆ ಮಾಡಬಾರದು. ಅವರನ್ನು ಗುಂಡಿಟ್ಟು ಕೊಲೆ ಮಾಡಿದರೂ ತಪ್ಪಿಲ್ಲ. ಎಲ್ಲಾ ಅಲ್ಪಸಂಖ್ಯಾತರು ಭಯೋತ್ಪಾದಕರಲ್ಲ, ದೇಶದ್ರೋಹಿಗಳು ಅಲ್ಲ. ಆದರೆ ಒಬ್ಬರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗದ ತಬ್ಲಿಘಿಗಳ ಮೇಲೆ ರೇಣುಕಾಚಾರ್ಯ ಹರಿಹಾಯ್ದರು.

ಒಬ್ಬನಿಂದ ಇಡೀ ದೇಶಕ್ಕೆ ವೈರಸ್ ಹರಡುತ್ತಿದೆ. ಚೀನಾದಲ್ಲಿ ಒಬ್ಬನಿಂದ ಇಡೀ ವಿಶ್ವಕ್ಕೆ ಕೊರೊನಾ ಬಂದಿರುವುದು. ಹೀಗಾದರೂ ದೆಹಲಿಗೆ ಯಾರು ಹೋಗಿದ್ದಾರೋ ಅವರು ಚಿಕಿತ್ಸೆ ಪಡೆಯಲು ಮುಂದೆ ಬರಲಿ ಎಂದು ಮನವಿ ಮಾಡಿಕೊಂಡರು.

ಯಾರು ಈ ವೈರಸ್ ಹರಡುತ್ತಾರೋ ಅವರನ್ನು ಭಯೋತ್ಪಾದಕರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರಿಂದ ದೇಶಕ್ಕೆ ಸುಮಾರು 36 ಸಾವಿರ ಕೋಟಿ ಆರ್ಥಿಕ ನಷ್ಟವಾಗಿದೆ. ಪ್ರಧಾನಿ, ಮುಖ್ಯಮಂತ್ರಿ ತುಂಬಾ ಕೆಲಸ ಮಾಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಎಲ್ಲರೂ ಮನೆಯಲ್ಲಿ ಇರಬೇಕು. ದೇಶ ದ್ರೋಹದ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಅವರನ್ನು ನಾನು ನೇರವಾಗಿ ದೇಶದ್ರೋಹಿಗಳು ಎಂದು ಹೇಳುತ್ತೇನೆ ಎಂದರು.


Bangalore Hot News