ಮುಳವಾಡ, ಚಿಮ್ಮಲಗಿ ಕಾಲುವೆ ಜಾಲದಿಂದ ಕೆರೆಗಳನ್ನು ತುಂಬಿಸಲು ಆಲಮಟ್ಟಿ ಜಲಾಶಯದ ನೀರು ಬಿಡುಗಡೆ
ವಿಜಯಪುರ :
ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲು ಅನುಕೂಲವಾಗುವಂತೆ ಮುಳವಾಡ ಹಂತ-3 ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಬರುವ ಕೆರೆಗಳನ್ನು ಪ್ರತಿಶತ 50 ರಷ್ಟು ಸಾಮಥ್ರ್ಯಕ್ಕೆ ಭರ್ತಿ ಮಾಡಲು ಆಲಮಟ್ಟಿ ಜಲಾಶಯದಿಂದ 1.30 ಟಿಎಂಸಿ ನೀರನ್ನು ಇಂದು ದಿನಾಂಕ : 20-04-2020 ರ ಬೆಳಿಗ್ಗೆ 8-00 ಗಂಟೆಯಿಂದ ನಾಲ್ಕು ವಾರಗಳವರೆಗೆ ನೀರು ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳವಾಡ ಹಂತ -3 ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಬರುವ ಕೆರೆಗಳನ್ನು 50% ಸಾಮಥ್ರ್ಯಕ್ಕೆ ಕುಡಿಯುವ ಉದ್ದೇಶಕ್ಕಾಗಿ ತುಂಬಿಸಲು, ಈ ಯೋಜನೆಯಡಿ ಬರುವ ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಇರುವುದನ್ನು ಅನುಲಕ್ಷಿಸಿ, ನೀರಿನ ಅಗತ್ಯತೆಯನ್ನು ಗಮನದಲ್ಲಿಸಿಕೊಂಡು ಕುಡಿಯುವ ನೀರಿನ ಉದ್ದೇಶಕ್ಕಾಗಿ ಸದ್ಯ ಆಲಮಟ್ಟಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣದಲ್ಲಿ ನೀರು ಪೋಲಾಗದಂತೆ ಮಿತವ್ಯಯವಾಗಿ ಒಟ್ಟು 1.30 ಟಿ.ಎಂ.ಸಿ ನೀರನ್ನು ನೀರು ಬಿಡುಗಡೆಗೊಳಿಸಿದ್ದಾರೆ.
ಕುಡಿಯುವ ನೀರನ್ನು ಕೊನೆಯ ಹಂತದವರೆಗೆ ತಲುಪಿಸಲು ಹೆಸ್ಕಾಂ, ಪೊಲೀಸ್, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕ ಪಂಚಾಯತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡಗಳನ್ನು ರಚಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಲುವೆಗಳಿಗೆ ಬಿಡುಗಡೆ ಮಾಡಲಾಗುವ ನೀರು ಪೋಲಾಗದಂತೆ ಮಿತವ್ಯಯವಾಗಿ ಬಳಸುವ ಹಾಗೂ ಕುಡಿಯುವ ನೀರನ್ನು ಕೃಷಿಗೆ ಬಳಸದಂತೆ ತಡೆಯಲು ಅಗತ್ಯ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಇಂಡಿ ಉಪ ಕಾಲುವೆ ಹಾಗೂ ಗುತ್ತಿ ಬಸವಣ್ಣ ಕಾಲುವೆಗಳಿಗೆ
ಆಲಮಟ್ಟಿ ಜಲಾಶಯದಿಂದ ತುರ್ತಾಗಿ ನೀರು ಹರಿಸಲು ಜಿಲ್ಲಾಧಿಕಾರಿಗಳ ಆದೇಶ
ವಿಜಯಪುರ :
ಜಿಲ್ಲೆಯ ಇಂಡಿ, ಸಿಂದಗಿ, ಚಡಚಣ ಭಾಗದ ವಿವಿಧ ಗ್ರಾಮಗಳ ಜನ ಜಾನುವಾರುಗಳಿಗೆ ಇಂಡಿ ಉಪ ಕಾಲುವೆ ಮತ್ತು ಗುತ್ತಿ ಬಸವಣ್ಣ ಕಾಲುವೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಹಾಗೂ ಇಂಡಿ ಮತ್ತು ಸಿಂದಗಿ ತಾಲೂಕಿನ ಕೆರೆಗಳನ್ನು ಗರಿಷ್ಠ ಸಾಮಥ್ರ್ಯಕ್ಕೆ ತುಂಬಲು, ನೀರಿನ ಪೋಲಾಗದಂತೆ ತಡೆದು ಮಿತವ್ಯಯಕ್ಕೆ ಅನುಕೂಲವಾಗುವಂತೆ ದಿನಾಂಕ : 20-04-2020 ರ ಬೆಳಿಗ್ಗೆ 8-00 ಗಂಟೆಯಿಂದ ಆಲಮಟ್ಟಿ ಜಲಾಶಯದಿಂದ 0.59 ಟಿ.ಎಂ.ಸಿ ನೀರನ್ನು ನಾರಾಯಣಪೂರ ಜಲಾಶಯಕ್ಕೆ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.
ಕುಡಿಯುವ ನೀರನ್ನು ಕೊನೆಯ ಹಂತದವರೆಗೆ ತಲುಪಿಸಲು ಹೆಸ್ಕಾಂ, ಪೊಲೀಸ್, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕ ಪಂಚಾಯತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡಗಳನ್ನು ರಚಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಲುವೆಗಳಿಗೆ ಬಿಡುಗಡೆ ಮಾಡಲಾಗುವ ನೀರು ಪೋಲಾಗದಂತೆ ಮಿತವ್ಯಯವಾಗಿ ಬಳಸುವ ಹಾಗೂ ಕುಡಿಯುವ ನೀರನ್ನು ಕೃಷಿಗೆ ಬಳಸದಂತೆ ತಡೆಯಲು ಅಗತ್ಯ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Bangalore Hot News
0 Comments
Please share your comment