ಕೊರೋನಾ- 191 ಜನರ ಸ್ಯಾಂಪಲ್ ರವಾನೆ
ರಾಯಚೂರು:
ದೇವದುರ್ಗ ತಾಲೂಕಿನಿಂದ 28, ಲಿಂಗಸೂಗೂರು ತಾಲೂಕಿನಿಂದ 35, ಮಾನ್ವಿ ತಾಲೂಕಿನಿಂದ 20, ಸಿಂಧನೂರು ತಾಲೂಕಿನಿಂದ 29 ಹಾಗೂ ರಾಯಚೂರು ತಾಲೂಕಿನಿಂದ 79 ಸೇರಿದಂತೆ ಏಪ್ರಿಲ್ 20ರ ಸೋಮವಾರ 191 ಜನರ ರಕ್ತ ಹಾಗೂ ಗಂಟಲಿನ ದ್ರವ್ಯ ಮಾದರಿಯನ್ನು ಶಂಕಿತ ಕೊರೋನಾ ಹಿನ್ನೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಒಟ್ಟಾರೆ ಜಿಲ್ಲೆಯಿಂದ 582 ಜನರ ರಕ್ತ ಹಾಗೂ ಗಂಟಲಿನ ದ್ರವ್ಯ ಮಾದರಿಯನ್ನು ಪರೀಕ್ಷೆಗಾಗಿ ಇದುವರೆಗೂ ಕಳುಹಿಸಲಾಗಿದೆ. ಅವುಗಳಲ್ಲಿ 81 ವರದಿಗಳು ನೆಗೆಟಿವ್ ಆಗಿದ್ದು, ಉಳಿದ ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ.
ಇಂದು ಆಸ್ಪತ್ರೆಗೆ 5 ಜನರು ದಾಖಲಾಗಿದ್ದು, ಫಿವರ್ ಕ್ಲಿನಿಕ್‌ಗಳಲ್ಲಿ 235 ಜನರನ್ನು ಥರ್ಮಲ್ ಸ್ಕಿನಿಂಗ್‌ಗೆ ಒಳಪಡಿಸಲಾಗಿದೆ. ಚಂದ್ರಬಡ ರಸ್ತೆಯಲ್ಲಿರುವ ಎಂಡಿಆರ್ ಹಾಸ್ಟಲ್, ಯರಮರಸ್ ಹಾಗೂ ಬೋಳಮಾನದೊಡ್ಡಿಯಲ್ಲಿ ಸರ್ಕಾರಿ ಕ್ವಾರಂಟೈನ್‌ನಲ್ಲಿ 628, ಸಿಂಧನೂರಿನ ಸರ್ಕಾರಿ ಕ್ವಾರಂಟೈನ್‌ನಲ್ಲಿ 58 ಜನರು, ಮಸ್ಕಿಯ ಎಂಡಿಆರ್‌ಎಸ್ ಹಾಸ್ಟೆಲ್‌ನಲ್ಲಿ 26 ಹಾಗೂ ದೇವದುರ್ಗದ ಎಸ್‌ಸಿ, ಎಸ್ಟಿ ಬಾಲಕಿಯರ ವಸತಿ ನಿಯಲದ ಸರ್ಕಾರಿ ಕ್ವಾರಂಟೈನ್‌ನಲ್ಲಿ 7 ಜನ ಸೇರಿದಂತೆ 719 ಜನರನ್ನು ಸರ್ಕಾರಿ ಕ್ವಾರಂಟೈನ್‌ಲ್ಲಿರಿಸಿ ಅವರ ಮೇಲೆ ನಿಗಾವಹಿಸಲಾಗಿದೆ. ಜಿಲ್ಲೆಯಿಂದ ಇದೂವರೆಗೆ ಕಳುಹಿಸಲಾದ ವರದಿಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಿಮ್ಸ್, ನವೋದಯ ಮೆಡಿಕಲ್ ಕಾಲೇಜಿಗೆ ಜಿಲ್ಲಾಧಿಕಾರಿ ಭೇಟಿ
ಕೋವಿಡ್-19 ಮಾದರಿ ಮಾದರಿ ಸಂಗ್ರಹ ಕೇಂದ್ರದಲ್ಲಿ ಪ್ರಾತ್ಯಕ್ಷಿಕೆ ವೀಕ್ಷಣೆ

ಶಂಕಿತ ಕರೋನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮುನ್ನ ನಗರದಲ್ಲಿರುವ ರಿಮ್ಸ್ ಹಾಗೂ ನವೋದಯ ಮೆಡಿಕಲ್ ಕಾಲೇಜ್‌ಗಳಲ್ಲಿ ಕೋವಿಡ್-19 ಮಾದರಿ ಸಂಗ್ರಹ ಕೇಂದ್ರಗಳಲ್ಲಿ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಅದನ್ನು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಿಕೊಡುವ ಪ್ರಕ್ರಿಯೆಗಳ ಪ್ರಾತ್ಯಕ್ಷಿಕೆಯನ್ನು ಜಿಲ್ಲಾಧಿಕಾರಿಗಳಾದ ಆರ್. ವೆಂಕಟೇಶ್ ಕುಮಾರ್ ಅವರು ಏ.20ರ ಸೋಮವಾರ ಸಂಜೆ ವೀಕ್ಷಿಸಿದರು.
ಜಿಲ್ಲಾಡಳಿತದ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕಾ ಹಾಗೂ ಸುರಕ್ಷಾ ಕ್ರಮಗಳನ್ನು ಕೈಗೊಂಡು ಅದರೊಂದಿಗೆ ಅಂತರ ಕಾಯ್ದುಕೊಂಡು ಶಂಕಿತ ಕೊರೋನಾ ರೋಗಿಯ ಗಂಟಲು ದ್ರವವನ್ನು ಪರೀಕ್ಷಿಸಲೆಂದು ಸಿದ್ದಪಡಿಸಲಾಗಿರುವ ಗಾಜಿನ ಪೆಟ್ಟಿಗೆಯ ಕೋವಿಡ್-19 ಮಾದರಿ ಸಂಗ್ರಹ ಕೇಂದ್ರದಲ್ಲಿ ಶಂಕಿತ ರೋಗಿಯೊಬ್ಬ ಬಂದ ಕೂಡಲೇ ಆತನನ್ನು ಕೋವಿಡ್-19 ಮಾದರಿ ಸಂಗ್ರಹ ಕೇಂದ್ರದ ಮುಂಭಾಗದಲ್ಲಿಡಲಾಗಿರುವ ಕಬ್ಬಿಣದ ಸ್ಟೂಲ್ ಮೇಲೆ ಕೂರಿಸಲಾಗುವುದು.
ಮೊಣಕೈವರೆಗಿನ ಹ್ಯಾಂಡ್ ಗ್ಲೌಸ್ ತೊಟ್ಟು ಮಾದರಿ ಸಂಗ್ರಹ ಕೇಂದ್ರದಲ್ಲಿರುವ ಪರೀಕ್ಷಕ ಒಳಗಿನಿಂದಲೇ ಶಂಕಿತ ರೋಗಿಗೆ ಗಂಟಲಿನೊಳಗೆ ಇಟ್ಟು ದ್ರವ ತೆಗೆದುಕೊಡುವ ಸಾಧನವನ್ನು ನೀಡುವರು. ಅದನ್ನು ರೋಗಿ ಗಂಟಲಲ್ಲಿ ಹಾಕಿ ತೆಗೆದುಕೊಟ್ಟನಂತರ, ಅದನ್ನು ಸಣ್ಣದಾದ ಗಾಜಿನ ಸುರಕ್ಷತಾ ಡಬ್ಬಿಯಲ್ಲಿಟ್ಟು ಪರೀಕ್ಷೆಗೆ ಕಳುಹಿಸಲಾಗುವುದು.
ನಂತರ ಸಂಪೂರ್ಣ ಸುರಕ್ಷತಾ ಡ್ರಸ್ ಧರಿಸಿದ ಸಿಬ್ಬಂದಿ ಮಾದರಿ ಸಂಗ್ರಹ ಕೇಂದ್ರದ ಸುತ್ತಮುತ್ತ, ರೋಗಿ ಕುಳಿತ ಚೇರ್ ಸುತ್ತಮುತ್ತ ಹಾಗೂ ಮಾದರಿ ಸಂಗ್ರಹ ಕೇಂದ್ರದ ಸುತ್ತಮತ್ತಲಿನ ವ್ಯಾಪ್ತಿಯ ಪ್ರದೇಶದಲ್ಲಿ ವೈರಾಣುಗಳನ್ನು ಕೊಲ್ಲುವ ರಾಸಾಯನಿಕ ಸಿಂಪಡಿಸುವರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ಶಂಕಿತ ಕೋವೀಡ್-19 ರೋಗಿಗಳು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರ ಗಂಟಲಿನ ದ್ರವ ಹಾಗೂ ರಕ್ತವನ್ನು ಪರೀಕ್ಷೆಗೆ ಕಳುಹಿಸುವ ನಂತರ ಫಲಿತಾಂಶದ ವರದಿ ಬರುವವರೆಗೂ ಅವರನ್ನು ಆಸ್ಪತ್ರೆಯಲ್ಲಿಯೇ ಇರಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಅವರನ್ನು ಹೊರಗೆ ಕಳುಹಿಸಬಾರದು, ರಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಎಚ್ಚರಿಕೆಯಿಂದ ಈ ಸಮಯದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷಿ ಕಾಂತ ರೆಡ್ಡಿ ಜಿ, ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ, ರಿಮ್ಸ್ ನಿರ್ದೇಶಕ ಬಸವರಾಜ್ ಪೀರಾಪೂರ, ನಗರ ಸಭೆ ಪೌರಾಯುಕ್ತ ದೊಡ್ಡಮನಿ, ಡಾ. ವಿಜಯಶಂಕರ, ಡಾ. ನಾಗರಾಜ್, ಡಾ. ಸುರೇಂದ್ರ ಬಾಬು, ನವೋದಯ ಮೆಡಿಕಲ್ ಪ್ರಿನ್ಸಿಪಾಲ್ ವಿಜಯ ಚಂದ್ರ್, ರಿಜಿಸ್ಟರ್ ಟಿ.ಶ್ರೀನಿವಾಸ್, ಮೆಡಿಕಲ್ ಸುಪರ್‌ಡೆಂಟ್ ಆಶೋಕ್ ಮಹೆಂದ್ರಿಕರ್, ಡಾ. ಸಿ.ಎನ್. ಕುಲಕರ್ಣಿ, ಮೋಹನ್ ರೆಡ್ಡಿ, ಟಿ.ಮಾರೆಪ್ಪ, ಸೇರಿದಂತೆ ವೈದ್ಯರು, ಮತ್ತು ಸಿಬ್ಬಂದಿವರ್ಗ ಇನ್ನಿತರರು ಉಪಸ್ಥಿತರಿದ್ದರು.
ಸರ್ಕಾರಿ ಕ್ವಾರಂಟೈನ್‌ಗೆ ಜಿಲ್ಲಾಧಿಕಾರಿ ಭೇಟಿ: ರಿಮ್ಸ್ ಹಾಗೂ ನವೋದಯ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ ನಂತರ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ(ಪದವಿ) ದಲ್ಲಿ ಜಿಲ್ಲಾಡಳಿತ ವತಿಯಿಂದ ಕೋವಿಡ್-19 ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದವರನ್ನಿರಿಸಿ ನಿಗಾವಹಿಸಲು ನಿರ್ಮಿಸಲಾಗಿರುವ ಸರ್ಕಾರಿ ಕ್ವಾರಂಟೈನ್‌ಗೆ ಭೇಟಿ ನೀಡಿದರು.
ಕೊರೋನಾ ವೈರಾಣು ಸೊಂಕು ಹೆಚ್ಚಾಗಿ ಕಂಡು ಬಂದ ಪ್ರದೇಶಗಳಿಂದ ಜಿಲ್ಲೆಗೆ ಆಗಮಿಸಿದ 175 ಮಂದಿಯನ್ನು ಈ ವಸತಿ ನಿಲಯದಲ್ಲಿರಿಸಿ ನಿಗಾವಹಿಸಲಾಗಿದೆ.
ಈ ಕ್ವಾರಂಟೈನ್‌ನಲ್ಲಿರುವವರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹಾಗೂ ಕ್ವಾರಂಟೈನ್‌ನಲ್ಲಿರುವವರು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದನ್ನು ಜಿಲ್ಲಾಧಿಕಾರಿಯವರು ಈ ಸಂದರ್ಭದಲ್ಲಿ ಪರಿಶೀಲಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷಿ ಕಾಂತ ರೆಡ್ಡಿ ಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಡಾ. ರಾಮಕೃಷ್ಣ, ನಗರ ಸಭೆ ಪೌರಾಯುಕ್ತ ದೊಡ್ಡ

Bangalore Hot News
0 Comments
Please share your comment